alex Certify ‘ಖಿಚಡಿ’ ಹಗರಣ : ಶಿವಸೇನೆ ನಾಯಕ ಅಮೋಲ್ ಕೀರ್ತಿಕರ್ ಗೆ E.D ಸಮನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಖಿಚಡಿ’ ಹಗರಣ : ಶಿವಸೇನೆ ನಾಯಕ ಅಮೋಲ್ ಕೀರ್ತಿಕರ್ ಗೆ E.D ಸಮನ್ಸ್

ನವದೆಹಲಿ : ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಲಸಿಗರಿಗೆ ‘ಖಿಚಡಿ’ ವಿತರಣೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಶಿವಸೇನೆ ಯುಬಿಟಿ ನಾಯಕ ಅಮೋಲ್ ಕೀರ್ತಿಕರ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ವಾಯುವ್ಯ ಕ್ಷೇತ್ರದಿಂದ ಶಿವಸೇನೆಯ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಕೀರ್ತಿಕರ್ ಅವರನ್ನು ಈ ಹಿಂದೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ತನಿಖೆ ನಡೆಸಿತ್ತು, ಏಕೆಂದರೆ ಖಿಚ್ಡಿ ಗುತ್ತಿಗೆದಾರರು ಹಣವನ್ನು ಬೇರೆ ಕಡೆ ವರ್ಗಾಯಿಸಿದ ಆರೋಪ ಕೇಳಿಬಂದಿತ್ತು.

ಈ ತಿಂಗಳ ಆರಂಭದಲ್ಲಿ, ಜಾರಿ ನಿರ್ದೇಶನಾಲಯದ ಮುಂಬೈ ವಲಯ ಸೂರಜ್ ಚವಾಣ್ ಒಡೆತನದ ಮುಂಬೈನಲ್ಲಿ ವಸತಿ ಫ್ಲ್ಯಾಟ್ ರೂಪದಲ್ಲಿ 88.51 ಲಕ್ಷ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತಯ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ), 2002 ರ ನಿಬಂಧನೆಗಳ ಅಡಿಯಲ್ಲಿ ಹಣ ವಶಪಡಿಸಿಕೊಳ್ಳಲಾಗಿತ್ತು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...