ನವದೆಹಲಿ : ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) 2.54 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಹಣವನ್ನು ವಾಷಿಂಗ್ ಮೆಷಿನ್ ನಲ್ಲಿ ಬಚ್ಚಿಡಲಾಗಿತ್ತು.
ಈ ಕಾರ್ಯಾಚರಣೆಯು ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತಾ ಮತ್ತು ಕುರುಕ್ಷೇತ್ರ ಸೇರಿದಂತೆ ಹಲವಾರು ಪ್ರಮುಖ ಭಾರತೀಯ ನಗರಗಳಲ್ಲಿ ನಡೆದಿದೆ. ಆದರೆ ವಾಷಿಂಗ್ ಮೆಷಿನ್ ನಲ್ಲಿ ಹಣ ಸಿಕ್ಕ ನಿಖರವಾದ ಸ್ಥಳವನ್ನು ಇಡಿ ಬಹಿರಂಗಪಡಿಸಿಲ್ಲ.
ಸಿಂಗಾಪುರ ಮೂಲದ ಹಡಗು ಸಂಸ್ಥೆಗಳಿಗೆ 1,800 ಕೋಟಿ ರೂ.ಗಳ ಬಾಹ್ಯ ಹಣ ರವಾನೆಯನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಅಕ್ರಮ ವಿದೇಶಿ ವಿನಿಮಯ ವಹಿವಾಟುಗಳು ಪತ್ತೆಯಾದ ನಂತರ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
ಕಂಪನಿಗಳಾದ ಕ್ಯಾಪ್ರಿಕಾರ್ನಿಯನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್, ಲಕ್ಷ್ಮಿಟನ್ ಮ್ಯಾರಿಟೈಮ್, ಹಿಂದೂಸ್ತಾನ್ ಇಂಟರ್ನ್ಯಾಷನಲ್, ರಾಜನಂದಿನಿ ಮೆಟಲ್ಸ್ ಲಿಮಿಟೆಡ್, ಸ್ಟಾವರ್ಟ್ ಅಲಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾಗ್ಯನಗರ ಲಿಮಿಟೆಡ್, ವಿನಾಯಕ್ ಸ್ಟೀಲ್ಸ್ ಲಿಮಿಟೆಡ್ ಮತ್ತು ವಸಿಷ್ಠ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ.