ಮಂಡ್ಯ : ಮಂಡ್ಯದಲ್ಲಿ ಪಟಾಕಿ ದುರಂತ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟು ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ತಮಿಳುನಾಡು ಮೂಲದ ರಮೇಶ್ (67) ಎಂದು ಗುರುತಿಸಲಾಗಿದೆ. ಪಟಾಕಿ ಸ್ಪೋಟಗೊಂಡು ರಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾಲಭೈರವೇಶ್ವರ ಜಾತ್ರೆಗೆ ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಬಂದಿದ್ದರು. ನಿನ್ನೆ ರಾತ್ರಿ ಜಾತ್ರೆ ಮುಗಿಸಿ ಆಲೆಮನೆಯಲ್ಲಿ ತಂಗಿದ್ದರು. ನಂತರ ಪಟಾಕಿಗಳನ್ನು ಇನ್ನೊಂದು ಜಾತ್ರೆಗೆ ಕೊಂಡೊಯ್ಯಲು ಗಾಡಿಗೆ ತುಂಬುತ್ತಿದ್ದಾಗ ಕಿಡಿಯೊಂದು ತಗುಲಿ ಪಟಾಕಿ ಸ್ಪೋಟಗೊಂಡಿದೆ . ಪರಿಣಾಮ ನಾಲ್ವರ ಪೈಕಿ ರಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಸ್ಫೋಟದ ರಭಸಕ್ಕೆ ಹೆಂಚುಗಳು ಹಾರಿಹೋಗಿದ್ದು, ಆಲೆಮನೆ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.