ಹೈದರಾಬಾದ್ : ಹೈದರಾಬಾದ್ ನಗರದಲ್ಲಿ ತಮ್ಮ ನಿವಾಸಕ್ಕೆ ನುಗ್ಗಿದ ಸಶಸ್ತ್ರ ದರೋಡೆಕೋರರನ್ನು ತಾಯಿ ಮತ್ತು ಮಗಳು ಸದೆಬಡಿದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಥಳೀಯ ಪೊಲೀಸರ ಪ್ರಕಾರ, ಇಬ್ಬರು ದರೋಡೆಕೋರರು ರಸೂಲ್ಪುರದ ಪೈಗಾ ಕಾಲೋನಿಯಲ್ಲಿರುವ ಅವರ ಮನೆಗೆ ಬಲವಂತವಾಗಿ ಪ್ರವೇಶಿಸಿದ್ದರು, ದರೋಡೆ ಮಾಡಿ ಅವರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಮಹಿಳೆಯರು ಹೆಲ್ಮೆಟ್ ಧರಿಸಿದ್ದ ಮತ್ತು ಶಸ್ತ್ರಾಸ್ತ್ರವನ್ನು ಹೊಂದಿದ್ದ ದರೋಡೆಕೋರರಲ್ಲಿ ಒಬ್ಬನನ್ನು ಧೈರ್ಯದಿಂದ ಎದುರಿಸುವುದನ್ನು ಕಾಣಬಹುದು. ಅಪಾಯದ ಹೊರತಾಗಿಯೂ, ಮಹಿಳೆಯರು ದರೋಡೆಕೋರನನ್ನು ಹೊಡೆದು ಓಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ತಾಯಿ ಮಗಳ ಸಾಹಸ ಹಾಗೂ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.