ಬೆಂಗಳೂರು : ಬೆಂಗಳೂರಲ್ಲಿ ಅಭಿಮಾನಿಗಳು ನಿರ್ಮಿಸಿದ್ದ ಡಾ.ರಾಜ್ ಕುಮಾರ್ ಪುತ್ಥಳಿಯನ್ನು ಬಿಬಿಎಂಪಿ ಕೆಡವಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಟ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಚಿಕ್ಕಪೇಟೆಯಲ್ಲಿ ವರನಟ ಡಾ.ರಾಜ್ ಕುಮಾರ್ ಪುತ್ಹಳಿಯನ್ನು ಸ್ಥಾಪಿಸಲಾಗಿತ್ತು, ಆದರೆ ಬಿಬಿಎಂಪಿ ಅದನ್ನು ಜೆಸಿಬಿ ಮೂಲಕ ಪುತ್ಹಳಿ ನಿಲ್ಲಿಸಲು ನಿರ್ಮಿಸಿದ್ದ ಕಟ್ಟೆಯನ್ನು ಒಡೆದಯ ಹಾಕಿದೆ ಎನ್ನಲಾಗಿದೆ.
ಘಟನೆ ಖಂಡಿಸಿ ಅಭಿಮಾನಿಗಳು, ಹೋರಾಟಗಾರರು ಚಿಕ್ಕಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಪುತ್ಹಳಿಯನ್ನು ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.