ಚಿತ್ರದುರ್ಗ : ತಾಯಿ ಹಾಗೂ ಇಬ್ಬರು ಮಕ್ಕಳು ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ.
ತಾಯಿ ಹಾಗೂ ಇಬ್ಬರು ಮಕ್ಕಳು ಬಹಿರ್ದೆಸೆಗೆ ಹೋದಾಗ ಈ ಘಟನೆ ನಡೆದಿದೆ.ಜಮೀನಿಗೆ ಹಾಕಿದ್ದ ಬೇಲಿಗೆ ಬೆಂಕಿ ಹಾಕಿ ಅದಕ್ಕೆ ಮಕ್ಕಳನ್ನು ತಳ್ಳಿ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಮಾರಕ್ಕ (24) ಹಾಗೂ ಮಕ್ಕಳಾದ ಹರ್ಷವರ್ಧನ್ (2) ಹಾಗೂ ನಯನ್ ಎಂದು ಗುರುತಿಸಲಾಗಿದೆ.
ತಾಯಿ ಮಾರಕ್ಕ ಜಮೀನಿನ ಬೇಲಿಗೆ ಬೆಂಕಿ ಹಚ್ಚಿ ಮಕ್ಕಳನ್ನು ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.