ದಾವಣಗೆರೆ : ಆಟವಾಡುತ್ತಿದ್ದ 3 ವರ್ಷದ ಕಂದಮ್ಮ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತುಂಗಾಭದ್ರಾ ಬಡಾವಣೆಯಲ್ಲಿ ನಡೆದಿದೆ.
3 ವರ್ಷದ ಅಸದ ಅಹಮದ್ ಎಂಬ ಮಗು ಮೃತಪಟ್ಟಿದೆ. ಮನೆಯಲ್ಲಿ ಆಟ ಆಡುತ್ತಿದ್ದ ಮಗ ಆಟವಾಡುತ್ತಾ ಆಟವಾಡುತ್ತಾ ನೀರಿನ ತೊಟ್ಟಿಗೆ ಬಿದ್ದಿದೆ. ಮನೆಯಲ್ಲಿ ಎಲ್ಲರೂ ನಮಾಜ್ ಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪೋಷಕರು ನಮಾಜ್ ಮುಗಿಸಿ ಹೊರಗೆ ಬಂದಾಗ ಮಗು ಕಾಣಿಸಲಿಲ್ಲ. ನಂತರ ನೀರಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದೆ. ಆದರೆ ಅಷ್ಟರಲ್ಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.