HomeKarnatakaಚಾರ್ಮಡಿಘಾಟ್ ನಲ್ಲಿ ಕೆಟ್ಟುನಿಂತ 16 ಚಕ್ರದ ವಾಹನ; ಕಿ.ಮೀಗಟಟ್ಟಲೇ ಸಾಲುಗಟ್ಟಿನಿಂತ ವಾಹನಗಳು; ಸವಾರರ ಪರದಾಟ

ಚಾರ್ಮಡಿಘಾಟ್ ನಲ್ಲಿ ಕೆಟ್ಟುನಿಂತ 16 ಚಕ್ರದ ವಾಹನ; ಕಿ.ಮೀಗಟಟ್ಟಲೇ ಸಾಲುಗಟ್ಟಿನಿಂತ ವಾಹನಗಳು; ಸವಾರರ ಪರದಾಟ

ಚಿಕ್ಕಮಗಳೂರು: ಚಾರ್ಮಡಿಘಾಟಿಯಲ್ಲಿ 16 ಚಕ್ರದ ಲಾರಿಯೊಂದು ಕೆಟ್ಟುನಿಂತ ಪರಿಣಾಮ ಇತರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ್ದ 16 ಚಕ್ರದ ಲಾರಿ ಚಾರ್ಮಡಿಘಾಟಿಯ 10ನೇ ತಿರುವಿನಲ್ಲಿ ಟರ್ನ್ ಮಾಡಲಾಗದೇ ಕೆಟ್ಟು ನಿಂತಿದೆ. ಇದರಿಂದ ಇತರ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ.

ಚಾರ್ಮಡಿಘಾಟಿಯಲ್ಲಿ 10 ಚಕ್ರದ ವಾಹನಕ್ಕಿಂತ ಭಾರಿ ಗಾತ್ರದ ವಾಹನಗಳಿಗೆ ನಿಷೇಧವಿದೆ. ಹೀಗಿದ್ದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಈ ಲಾರಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂಜಾನೆಯಿಂದಲೂ ಚಾರ್ಮಡಿಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುತ್ತಿದ್ದು, ಪೊಲೀಸರು ಬೃಹತ್ ವಾಹನ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular