ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ನಿರ್ವಹಣೆ ಮಾಡುವ ನಾಗರಿಕರಿಗಾಗಿ ಕೆರೆ ಮಿತ್ರ ನೋಂದಣಿಯ ಅವಧಿ ವಿಸ್ತರಣೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ನಿರ್ವಹಣೆ ಮಾಡುವ ನಾಗರಿಕರಿಗಾಗಿ ಕೆರೆ ಮಿತ್ರ ನೋಂದಣಿಗೆ ಮಾರ್ಚ್ 25ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ನಾಗರಿಕರು https://keremithra.bbmpgov.in/registration ಲಿಂಕ್ ಮೂಲಕ ನೋಂದಾಯಿಸಿಕೊಂಡು ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಕೈ ಜೋಡಿಸಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ : ಡಿಸಿಎಂ ಡಿಕೆಶಿ
ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿ ಮೂಲಕ ಗ್ರಾಮಾಂತರ ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಡಿಕೆಶಿ ಮಾತನಾಡಿದರು.
ಈ ಯೋಜನೆಯಿಂದಾಗಿ ರಾಮನಗರ ಸುತ್ತಮುತ್ತಲಿನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದಂತೆ ಇತರ ಊರುಗಳಿಗೆ ವಲಸೆ ಹೋಗುವುದು ತಪ್ಪಲಿದೆ. ಖಾಸಗಿ ಸಹಭಾಗಿತ್ವದ ಪೈಲಟ್ ಯೋಜನೆ ಮೂಲಕ ರಾಮನಗರ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು ಇದರಿಂದ ಸುಮಾರು 800 ರಿಂದ 1000 ಮಕ್ಕಳಿಗೆ ನೆರವಾಗಲಿದೆ. ಶಾಲೆಗಳನ್ನು ಎಲ್ಲಿ ನಿರ್ಮಾಣ ಮಾಡಲಾಗುವುದು ಎನ್ನುವ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.