ಮಂಡ್ಯ : ನನಗೆ 80 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ( H.D Kumaraswamy) ಹೇಳಿದರು.
ಮಂಡ್ಯದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ”ನನಗೆ 80 ವರ್ಷ ಆಯಸ್ಸು ಮಾತ್ರ, ಮಾ.21 ಕ್ಕೆ ನಮಗೆ ಆಪರೇಷನ್ ಇದೆ. ಮಾರ್ಚ್ 25 ಕ್ಕೆ ಮಂಡ್ಯಕ್ಕೆ ಬಂದು ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ನನಗೆ 80 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ…ಅಷ್ಟು ಬೇಗ ಈ ಜೀವ ಮಣ್ಣಿಗೆ ಹೋಗುವುದಿಲ್ಲ, ಜನ ಸರ್ಟಿಫಿಕೇಟ್ ನೀಡಿದ ಮೇಲೆಯೇ ಈ ಜೀವ ಮಣ್ಣಿಗೆ ಹೋಗುವುದು, ಜನರ ರುಣ ತೀರಿಸಿದ ಮೇಲೆಯೇ ಈ ಜೀವ ಮಣ್ಣಿಗೆ ಹೋಗುವುದು” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
”ಮಂಡ್ಯ ಸಂಸದೆ ಸುಮಲತಾ ತನ್ನ ಸ್ವಂತ ಅಕ್ಕ, ಅವರ ಜೊತೆ ಸಂಘರ್ಷ ಮುಂದುವರೆಸಿಕೊಂಡು ಹೋಗಲ್ಲ ಎಂದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಲವು ಗೊಂದಲ ಇತ್ತು, ಅದಕ್ಕೆ ನಾನೇ ಪ್ರಚಾರಕ್ಕೆ ಹೋಗಿ ತೆರೆ ಎಳೆದೆ ಎಂದರು. ಮಂಡ್ಯ ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲವಿದೆ. ಮಂಡ್ಯ ಕ್ಷೇತ್ರ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಹಲವರಲ್ಲಿದೆ, ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡುವುದಕ್ಕಿಂತ ನೀವೇ ಕೊಟ್ಟಿದ್ದೀರಿ” ಎಂದರು.