ಬೆಂಗಳೂರು : ಬೆಂಗಳೂರಿಗರಿಗೆ ಗುಡ್ ನ್ಯೂಸ್ ಎಂಬಂತೆ ರಾಜ್ಯ ಸರ್ಕಾರ 11 ಕೋಟಿ ವೆಚ್ಚದಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸಲು ಸಜ್ಜಾಗಿದೆ.
ಬೆಂಗಳೂರಿನ ಪೂರ್ವ ಭಾಗವಾದ ಕೆಆರ್ ಪುರ ತಾಲೂಕಿನಲ್ಲಿ ಎನ್ಜಿಇಎಫ್, ಬೆಂಗಳೂರು ಸಂಸ್ಥೆಯ 65 ಎಕರೆ ಜಾಗದಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸಿ, ವಾಕಿಂಗ್ ಹಾಗೂ ಸೈಕ್ಲಿಂಗ್ ಪ್ರತ್ಯೇಕ ಟ್ರ್ಯಾಕ್, ಆಟದ ಮೈದಾನ ಸೇರಿದಂತೆ ಹಲವು ಸೌಕರ್ಯಗಳನ್ನು ಪಾರ್ಕ್ನಲ್ಲಿ ಒದಗಿಸಲಿದೆ.
ಕುಟುಂಬದ ಎಲ್ಲ ವಯೋಮಾನದ ಸದಸ್ಯರು ಈ ಉತ್ತಮ ಪರಿಸರದಲ್ಲಿ ಆರೋಗ್ಯಕರ ಸಮಯ ಕಳೆಯಲು ಅನುಕೂಲವಾಗುವಂತೆ ಲಾಲ್ಬಾಗ್, ಕಬ್ಬನ್ ಪಾರ್ಕ್ ರೀತಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕೋಟ್ಯಂತರ ರೂ.ಗಳ ಬೆಲೆ ಬಾಳುವ ಜಮೀನನ್ನು ಯಾವುದೇ ಕೈಗಾರಿಕೆಗಳಿಗೆ ನೀಡದೇ, ಸಾರ್ವಜನಿಕರ ಬಳಕೆಗಾಗಿ ಟ್ರೀ ಪಾರ್ಕ್ ಅನ್ನು ಅಂದಾಜು ವೆಚ್ಚ 11 ಕೋಟಿ ರೂ.ಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.