ಬೆಂಗಳೂರು : ವಿಧಾನಸೌಧದ ಮುಂದೆ 23 ಕೋಟಿ ವೆಚ್ಚದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಇದಕ್ಕೆ ಸಂಪುಟ ಸಭೆ ಕೂಡ ಒಪ್ಪಿಗೆ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವರು ವಿಧಾನಸೌಧದ ಮುಂದೆ 23 ಕೋಟಿ ವೆಚ್ಚದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಕೆಂಗಲ್ ಹನುಮಂತಯ್ಯ ಪ್ರತಿಯ ರಸ್ತೆಯ ಪಕ್ಕದಲ್ಲಿ ಸ್ಥಾಪನೆ ಆಗಲಿದೆ ಎಂದರು.
ಬೆಂಗಳೂರಿನ ಪೂರ್ವಭಾಗದ ವಿಶಾಲವಾದ ಪ್ರದೇಶದಲ್ಲಿ ಟ್ರೀ ಪಾರ್ಕ್ ಮಾಡಲಾಗುತ್ತದೆ. ಅದರಲ್ಲಿ ಆಟದ ಮೈದಾನ, ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದರು. ಇದಕ್ಕೆ 11 ಕೋಟಿ ವೆಚ್ಚ ತಗುಲಲಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಎಂದರು ಟ್ರೀ ಪಾರ್ಕ್ಗೆ ಒಟ್ಟು 11 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. 1500 ಕೋಟಿ ರೂ ಬೆಲೆ ಬಾಳುವ ಜಾಗ ಸಾರ್ವಜನಿಕರಿಗೆ ಮೀಸಲಿಡಲಾಗಿದೆ ಎಂದರು. ಹಾಗೂ ರೈತರ ಉತ್ಪಾದನೆ, ಲಾಭಾಂಶ ಜಾಸ್ತಿ ಆಗಬೇಕು. ಬೆಳೆ ಸಂರಕ್ಷಣೆ, 67 ಕೋಟಿ ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ ಇನ್ನೊವೇಷನ್ ಸೆಂಟರ್ ಮಾಡಲು ತೀರ್ಮಾನ ಆಗಲಿದೆ ಎಂದರು.