ಬೆಂಗಳೂರು : ರಾಜ್ಯದಲ್ಲಿರುವ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿರುವ/ಮುಕ್ತಾಯಗೊಳ್ಳಲಿರುವ ಸಹಕಾರ ಸಂಘಗಳು/ಸಹಕಾರ ಬ್ಯಾಂಕುಗಳ (ಪ್ರಾಥಮಿಕ, ಮಾಧ್ಯಮಿಕ /ಒಕ್ಕೂಟಗಳ (ಫೆಡರಲ್ ಸಂಸ್ಥೆ) ಮತ್ತು ಅಪೆಕ್ಸ್ ಸಹಕಾರ ಸಂಘಗಳ) ಚುನಾವಣೆಗಳನ್ನು ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಚುನಾವಣೆಗಳನ್ನು ಮುಂದೂಡಿ ಹಾಲಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿಯನ್ನು ಮುಂದುವರಿಸಿ ಆದೇಶ ಹೊರಡಿಸಿದೆ. ಈಗಾಗಲೇ ಚುನಾವಣೆ ವೇಳಾಪಟ್ಟಿ (Calender of events) ಹೊರಡಿಸಿ, ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದಲ್ಲಿ ಅದನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಈಗಾಗಲೇ ಘನ ನ್ಯಾಯಾಲಯಗಳ ಆದೇಶದಂತೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದಲ್ಲಿ/ ಪ್ರಾರಂಭವಾಗಬೇಕಿದ್ದಲ್ಲಿ ಈ ಆದೇಶ ಕುರಿತು ಮಾನ್ಯ ಘನ ನ್ಯಾಯಾಲಯದ ಗಮನಕ್ಕೆ ತಂದು ಘನ ನ್ಯಾಯಾಲಯದ ಆದೇಶದಂತೆ ಕ್ರಮವಿಡತಕ್ಕದ್ದು ಎಂದು ಸರ್ಕಾರ ಆದೇಶ ಹೊರಡಿಸಿದೆ.