ಹಾಸನ : ಮಾರ್ಚ್ 21 ಕ್ಕೆ ನನಗೆ ಆಪರೇಷನ್ ಆಗುತ್ತದೆ, ಆಮೇಲೆ ಮೈತ್ರಿ ಅಭ್ಯರ್ಥಿಗಳ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ಡಿಕೆ ‘ಮಾರ್ಚ್ 21 ಕ್ಕೆ ನನಗೆ ಆಪರೇಷನ್ ಆಗುತ್ತದೆ, ಅಮೆರಿಕದಿಂದ ಡಾಕ್ಟರ್ ಬರುತ್ತಾರೆ. ಆಪರೇಷನ್ ಆದ ಬಳಿಕ ಸ್ವಲ್ಪ ದಿನ ವಿಶ್ರಾಂತಿ ಪಡೆಯುತ್ತೇನೆ. , ನಂತರ ಮೈತ್ರಿ ಅಭ್ಯರ್ಥಿಗಳ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಭಾವುಕರಾದ ಹೆಚ್ಡಿಕೆ
ನಾನು ಅಷ್ಟು ಬೇಗ ಸಾಯಲ್ಲ, ನಿಮ್ಮ ಜೊತೆ ಇರ್ತೇನೆ, ಭಗವಂತ ನನಗೆ ಆಯಸ್ಸು ಕೊಟ್ಟಿದ್ದಾನೆ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ. ದಯವಿಟ್ಟು ಜೆಡಿಎಸ್ ಉಳಿಸಿಕೊಂಡಿ ಎಂದು ಹೆಚ್ಡಿಕೆ ಭಾವುಕರಾದರು.
ಡಾ. ಮಂಜುನಾಥ್ ಸ್ಪರ್ಧೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಡಾ. ಮಂಜುನಾಥ್ ಮಣ್ಣಿನ ಮಗ, ಅವರನ್ನು ಅಭ್ಯರ್ಥಿಯಾಗಿ ಮಾಡಬೇಕೆಂದು ನಾನು ಸಲಹೆ ನೀಡಿದ್ದೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ವರಿಷ್ಟರು ಒತ್ತಡ ಹೇರಿದ್ದರು ಎಂದರು.