ಬೆಂಗಳೂರು : ಓವರ್ ಟೇಕ್ ಮಾಡಿದ್ದಕ್ಕೆ ಆ್ಯಂಬುಲೆನ್ಸ್ ಚಾಲಕನಿಗೆ ವ್ಯಕ್ತಿಯೋರ್ವ ಮನಸ್ಸಿಗೆ ಬಂದ ಹಾಗೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಶರತ್ ಹಾಗೂ ಆತನ ಪತ್ನಿ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಂಬುಲೆನ್ಸ್ ಚಾಲಕ ರಾಷ್ ಆಗಿ ಗಾಡಿಸಿ ಓಡಿಸಿ ನನ್ನ ಕಾರನ್ನು ಓವರ್ ಟೇಕ್ ಮಾಡಿದ್ದಾನೆ. ಇದಕ್ಕೆ ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಟ್ಟದಾಗಿ ಕೈ ತೋರಿಸಿದ್ದಾನೆ. ಇದರಿಂದ ನಾವು ಆತನ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ಶರತ್ ಹೇಳಿದ್ದಾರೆ.
ಎಮರ್ಜೆನ್ಸಿ ಇದೆ ಬಿಡಿ ಎಂದು ಕೇಳಿದರೂ..ನನ್ನ ಮೇಲೆ ಶರತ್ ಹಲ್ಲೆ ನಡೆಸಿದ್ದಾರೆ ಎಂದು ಆಂಬುಲೆನ್ಸ್ ಚಾಲಕ ಆರೋಪಿಸಿದ್ದಾರೆ. ಪಶು ವೈದ್ಯಕೀಯ ಸೇವಾ ಇಲಾಖೆಗೆ ಸೇರಿದ ಆಂಬುಲೆನ್ಸ್ ಕಡಬದಿಂದ ನೆರಿಯಾಗೆ ಬರುತ್ತಿತ್ತು. ಹಲ್ಲೆ ನಡೆಸಿದ ಹಿನ್ನೆಲೆ ಬೆಂಗಳೂರು ಮೂಲದ ಶರತ್ ಹಾಗೂ ಆತನ ಪತ್ನಿ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.