ಚಿತ್ರದುರ್ಗ : ನನಗೇನಾದ್ರೂ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡಿತಿದ್ದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ .ಎಸ್ ಮಂಜುನಾಥ್ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ.
ಚುನಾವಣೆ ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಹೇಳಿದ್ದಾರೆ. ನಾನು ಓರ್ವ ಕಾಂಗ್ರೆಸ್ಸಿಗನಾಗಿ ಈ ಮಾತನ್ನು ಹೇಳುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದು, 100 ರೂಪಾಯಿ ಬೆಲೆ ಇಳಿಸಿದ್ದಾರೆ. ನನ್ನ ಕೈಗೆ ಸಿಕ್ಕಿದ್ರೆ ನನ್ನ ಕಾಲುಗಳಲ್ಲಿ ಏನಿದೆಯೋ ಅದರಿಂದ ಅವನನ್ನು ಹೊಡೆಯುತ್ತೇನೆ.
ಈ ದೇಶದ ನಾಗರಿಕನಾಗಿ, ನೀವೆಲ್ಲರೂ ಇದನ್ನು ಕೇಳಬೇಕು, ಇಲ್ಲದಿದ್ದರೆ ಯಾರೂ ಕೇಳುವುದಿಲ್ಲ… ನಾವು ಪ್ರಶ್ನಿಸಲು ಕಲಿಯದಿದ್ದಾಗ, ನಾವು ರಾಜ್ಯದ ಮತದಾರರಾಗಲು ಸಂಪೂರ್ಣವಾಗಿ ಅರ್ಹರಾಗುವುದಿಲ್ಲ. ನಾನು ಜನರಿಗೆ ಮನವಿ ಮಾಡುತ್ತೇನೆ, ಚುನಾವಣೆ ಸುಮಾರು 15 ದಿನಗಳಲ್ಲಿ ಪ್ರಾರಂಭವಾಗುತ್ತದೆ. ಬೆಲೆಗಳನ್ನು 100 ರೂ.ಗಳಷ್ಟು ಕಡಿಮೆ ಮಾಡಿರುವುದಕ್ಕೆ ನೀವು ಏಕೆ ಸಂತೋಷಪಡುತ್ತೀರಿ? ಎಂದು ಹೇಳಿದ್ದಾರೆ.