ಬೆಂಗಳೂರು : ಮಾರ್ಚ್ 1 ರಂದು ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಒಂದು ವಾರದ ನಂತರ ಮಾರ್ಚ್ 9 ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನ ಕೆಫೆ ಆರಂಭವಾಗಿದೆ. ಎಂದಿನಂತೆ ಗ್ರಾಹಕರಿಗೆ ಇಂದಿನಿಂದ ಕೆಫೆ ಪ್ರವೇಶ ಮುಕ್ತವಾಗಲಿದೆ.
ಕೆಫೆಯ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆ ಬೆಂಗಳೂರಿನಲ್ಲಿರುವ ಬಹಳ ಜನಪ್ರಿಯ ಕೆಫೆಯಾಗಿದೆ. ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸುತ್ತಾರೆ.
ನಾವು ಬಾಂಬ್ ಸ್ಫೋಟಕ್ಕೆ ಹೆದರುವುದಿಲ್ಲ, ಆದರೆ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ. ಗ್ರಾಹಕರ ಸುರಕ್ಷತೆ ಮತ್ತು ತೃಪ್ತಿ ನಮಗೆ ಅತ್ಯುನ್ನತವಾಗಿದೆ ಮತ್ತು ನಾವು ನಮ್ಮ ಗ್ರಾಹಕರಿಗೆ ಯಾವುದೇ ಭಯವಿಲ್ಲದೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ” ಎಂದು ಕೆಫೆ ಮಾಲೀಕ ರಾಘವೇಂದ್ರ ಹೇಳಿದರು. ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೆಟಲ್ ಶೋಧಕಗಳೊಂದಿಗೆ ಸ್ಕ್ರೀನಿಂಗ್ ಸೇರಿದಂತೆ ಹಲವು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ರಾಮೇಶ್ವರಂ ಕೆಫೆ ಶುರುವಾಗಿದ್ದು, ನಿವೃತ್ತ ಆರ್ಮಿ ಆಫೀಸರ್ಗಳಿಂದ ಕೆಫೆಗೆ ಭದ್ರತೆ ನೀಡಲಾಗಿದೆ. ನರ ಮೇಲೆ ನಿಗಾ ಇಡಲು ಎಲ್ಲಾ ಬ್ರಾಂಚ್ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಳಗ್ಗೆ 6.30ಕ್ಕೆ ರಾಷ್ಟ್ರಗೀತೆ ಹಾಡುವುದರೊಂದಿಗೆ ಕೆಫೆ ತೆರೆಯಲಾಗಿದೆ.
ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದತೆ ತನಿಖೆ ಚುರುಕುಗೊಳಿಸಿರುವ ಎನ್ ಐಎ ಅಧಿಕಾರಿಗಳು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮೂವರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತನನ್ನು ಈಗಾಗಲೇ ವಿಚಾರಣೆ ನಡೆಸಿದ್ದ ಎನ್ ಐಎ ತಂಡ ಇದೀಗ ಮತ್ತೆ ಮೂವರನ್ನು ವಶಕ್ಕೆ ಪಡೆದಿದೆ.