ರಾಯಚೂರು : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ರಾಯಚೂರು ಹಾಗೂ ನಾಲ್ಕು ಖಾಸಗಿ ಕಂಪನಿಗಳು ಸಹಭಾಗಿತ್ವದಲ್ಲಿ ಮಾ.7 ರಂದು ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು. ಇದರಲ್ಲಿ ಖಾಸಗಿ ಕಂಪನಿ ಭಾಗವಹಿಸಿ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಿಕೊಳ್ಳುತ್ತಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಭ್ಯರ್ತಿಗಳು ಪದವೀಧರರು ಹಾಗೂ ಎಸ್.ಎಸ್.ಎಲ್.ಸಿ ಪಿ.ಯು.ಸಿ ಎಲ್ಲಾ ಪದವೀಧರ 18 ರಿಂದ 25 ವರ್ಷಗಳ ವರೆಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ, ಉದ್ಯೋಗವಕಾಶಕ್ಕಾಗಿ ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಜೆರಾಕ್ಸ ಪ್ರತಿಗಳು ಮತ್ತು ತಮ್ಮ ಬಯೋಡಾಟಾ, ಆಧಾರ್ ಕಾರ್ಡ ಪ್ರತಿ ಕಡ್ಡಾಯ ಹಾಗೂ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದಾಗಿದೆ.
ನೇರ ಸಂದರ್ಶನ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ, ಬದಲಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಸದರಿ ನೇರ ಸಂದರ್ಶನ ಹಾಜರಾಗಬಹುದಾಗಿರುತ್ತದೆ. ನೇರ ಸಂದರ್ಶನ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಾಲಾಜಿ ಕಾಂಪ್ಲೇಕ್ಸ, ನೆಲ ಮಹಡಿ, ಗೂಡ್ ಶೆಡ್ ರಸ್ತೆ, ಸ್ಟೇಷನ ಏರಿಯಾ, ರಾಯಚೂರು.