ಚಾಮರಾಜನಗರ : ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೆಲ್ಲಾ ಮೇರಿಗೆ ಚಾಮರಾಜನಗರ ಬಾಲ ನ್ಯಾಯಂಮಡಳಿ ಕ್ಲೀನ್ ಚಿಟ್ ನೀಡಿ ಆದೇಶ ಹೊರಡಿಸಿದೆ.
ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೇಲ್ಲಾ ಮೇರಿ ರಾಮಾಪುರ ಪೊಲೀಸ್ ಠಾಣೆ ದಾಳಿ ಆರೋಪಿಯಾಗಿದ್ದು, ಪಾಲಾರ್ ಬಾಂಬ್ ಸ್ಪೋಟದ ಆರೋಪಿಯಾಗಿದ್ದು, ಇದೀಗ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. 2002 ರಲ್ಲಿ ಸ್ಟೆಲ್ಲಾ ಮೇರಿಯನ್ನು ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಪೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
ಪಾಲಾರ್ ಬಾಂಬಾ ಸ್ಪೋಟ ಸೇರಿದಂತೆ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಚಾಮರಾಜನಗರ ನ್ಯಾಯಮಂಡಳಿ ಆದೇಶ ಹೊರಡಿಸಿದೆ.