![](https://kannadadunia.com/wp-content/uploads/2023/12/Cm-siddaramaiah-4.jpg)
ಬೆಂಗಳೂರು: ಗುತ್ತಿಗೆದಾರನಿಂದ LOC ಬಿಡುಗಡೆಗೆ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
5 ವರ್ಷ ಹಣಕಾಸು ಮಂತ್ರಿಯಾಗಿದ್ದೆ, ಈಗ 15ನೇ ಬಜೆಟ್ ಮಂಡಿಸಿದ್ದೇನೆ. ಯಾರಾದರೂ ಒಬ್ಬ ಗುತ್ತಿಗೆದಾರನಿಂದ LOC ಬಿಡುಗಡೆಗೆ ಯಾವತ್ತಾದರೂ ಐದು ಪೈಸೆ ಲಂಚ ಕೇಳಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಹೇಳಿದ್ದಾರೆ.
2013-2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಾಗಲೀ ಅಥವಾ ಇದೀಗ ಎರಡನೇ ಬಾರಿ ಸಿಎಂ ಆಗಿರುವ ಅವಧಿಯಲ್ಲಾಗಲೀ ಅಥವಾ ನಾನು ವಿರೋಧ ಪಕ್ಷದ ನಾಯಕನಾಗಿರುವ ಅವಧಿಯಲ್ಲಾಗಿರಲಿ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.