ಬೆಂಗಳೂರು : ಯಾರಾದರೂ ನನಗೆ ಐದು ಪೈಸೆ ಲಂಚ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನ್ನ ಅವಧಿಯಲ್ಲಿ ಯಾರಿಂದಲೂ ಲಂಚ ಪಡೆದಿಲ್ಲ. ಒಂದು ವೇಳೆ ನನಗೆ ಐದು ಪೈಸೆ ಲಂಚ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಇವತ್ತಿನವರೆಗೆ ಎಲ್ ಓ ಸಿ ರಿಲೀಸ್ ಮಾಡೋದಕ್ಕೆ ಐದು ಪೈಸೆ ಪಡೆದಿದ್ದನ್ನು ಯಾರಾದ್ರೂ ಗುತ್ತಿಗೆದಾರ ಬಂದು ಹೇಳಿದರೆ ಇವತ್ತೇ ರಾಜೀನಾಮೆ ನೀಡುತ್ತೇನೆ ಎಂದರು.ನಾನು ಹೇಳಿದರು ಕೂಡ ಹಣವಿಲ್ಲದೇ ಗುತ್ತಿಗೆ ಕೆಲಸವನ್ನ ಮಾಡಬಾರದು, ಇದರಿಂದ ತೊಂದರೆಯಾಗುವುದು ನಿಮಗೆ, ಸುಮಾರು ಕೋಟಿಗಳ ಹಣ ಬಾಕಿ ಉಳಿದಿದ್ದು, ಹಣವನ್ನು ಎಲ್ಲಿಂದ ತರಲಿ ಎಂದು ಹೇಳಿದರು.