ಮಂಗಳೂರು : ಮೂವರು ಯುವಕರು ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ ನಡೆದಿದೆ.
ಮೃತರನ್ನು ಮಿಲನ್ (20) ಲಿಖಿತ್ (18) ನಾಗರಾಜ್ (24) ಎಂದು ಗುರುತಿಸಲಾಗಿದೆ. ಪಣಂಬೂರು ಬೀಚಿಗೆ ಪ್ರವಾಸಕ್ಕೆಂದು ಬಂದಾಗ ಬೀಚ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿಖಿತ್ ಕೈಂಬದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ರೆ , ಮಿಲನ್ ಹಾಗೂ ನಾಗರಾಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.