ಬೆಂಗಳೂರು : ರಾಜ್ಯದ ಮಹಿಳೆಯರ ಖಾತೆಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದ್ದು, ಹಲವರ ಖಾತೆಗೆ ಹಣ ಜಮಾ ಆಗಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಹಣ ಬಂದಿಲ್ಲ.
ಇದೀಗ ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ ಡೇಟ್ ಎಂದರೆ..? ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ಓಪನ್ ಮಾಡಿಸಿ ಅವರ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಕೂಡ ಮಹಿಳೆಯರ ಸಮಸ್ಯೆಗೆ ಕೈ ಜೋಡಿಸಲಿದ್ದು, ಅವರ ಜೊತೆ ನಿಂತು ಗೃಹಲಕ್ಷ್ಮಿ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚನೆ ನೀಡಿದೆ.
ಹಾಗೂ, ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡು ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ ಗಳಲ್ಲಿ ಪರಿಹರಿಸಿಕೊಳ್ಳಬೇಕು.ನೀವು ಕೊಟ್ಟಿರುವ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಕೆವೈಸಿ ಮಾಡಿಸಬೇಕು. ಅಂದರೆ, ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಅನ್ನು ಮಾಡಿಸಿಕೊಳ್ಳಿ ಆಗ ಹಣ ಜಮೆ ಆಗಲಿದೆ. ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ಗೆ ಎಸ್ಎಂಎಸ್ ಬರುತ್ತದೆ. ಹಲವು ಬಾರಿ ಎಸ್ಎಂಎಸ್ ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್ ನಲ್ಲಿ ಹೋಗಿ ಪಾಸ್ ಬುಕ್ ಚೆಕ್ ಮಾಡಿಸಬೇಕು.