ಬೆಂಗಳೂರು : ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತು ಇದೆ. ಆದರೆ ಇಲ್ಲೊಬ್ಬಳು ಪಾಪಿ ತಾಯಿ ಹೆತ್ತ ಮಗುವನ್ನೇ (2-3 ವರ್ಷದ ಮಗು) ಕೂಡಿಹಾಕಿ ಚಿತ್ರಹಿಂಸೆ ನೀಡಿ ರಾಕ್ಷಸಿಯಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹನುಮಂತನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. . ತಾಯಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಮಗುವನ್ನು ಕೂಡಿಹಾಕಿ ಮನಬಂದಂತೆ ಥಳಿಸಿ, ಕಾಲಲ್ಲಿ ಒದ್ದು. ಮರ್ಮಾಂಗವನ್ನು ಕಚ್ಚಿ ಚಿತ್ರಹಿಂಸೆ ನೀಡಿದ್ದಾಳೆ. ಮಹಿಳೆಯ ಅಮಾನುಷ ವರ್ತನೆಗೆ ಕಾರಣ ತಿಳಿದು ಬಂದಿಲ್ಲ.
ವಿಷಯ ತಿಳಿಸಿದ ಸಂಘಟನೆಯೊಂದು ಕೂಡಲೇ ಧಾವಿಸಿ ಮಗುವನ್ನು ರಕ್ಷಿಸಿದೆ. ಬಳಿಕ ಮಗು ಘಟನೆಯ ಬಗ್ಗೆ ಹೇಳಿಕೊಂಡಿದೆ. ತೊದಲು ಮಾತನಾಡುವ ಪುಟ್ಟ ಕಂದಮ್ಮನ ಮೇಲೆ ತಾಯಿ ಈ ಕೃತ್ಯ ಎಸಗಿದ್ದು, ಮಗು ಮೈ ತುಂಬಾ ಗಾಯಗಳಾಗಿದೆ. ನಂತರ ಮಗುವವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.