ಬೆಂಗಳೂರು : ಸಾರ್ವಜನಿಕರು ನಾಳೆ (ಮಾ.3) ರಂದು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೊಲಿಯೋ ಲಸಿಕೆ ಹಾಕಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು “ಪೋಲಿಯೋ ಮುಕ್ತ ಭಾರತ” ನಮ್ಮ ಅಭಿಯಾನಕ್ಕೆ ನಿಮ್ಮ ಬೆಂಬಲವಿರಲಿ. 5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ. ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯ ನಿರ್ಧರಿಸಲಿದೆ. ಮರೆಯದಿರಿ.. ಮಾರ್ಚ್ 3 ರ ಭಾನುವಾರದ ನಿಮ್ಮ ಮೊದಲ ಕಾರ್ಯ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದಾಗಿರಲಿ ಎಂದು ಮನವಿ ಮಾಡಿದ್ದಾರೆ.
ಮಗುವಿನ ಶಾಶ್ವತ ಅಂಗವೈಕಲ್ಯ ತಡೆಯಲು ಎರಡು ಹನಿ ಪಲ್ಸ್ ಪೊಲಿಯೋ ಅತ್ಯಗತ್ಯ. ಮಾರ್ಚ್ 3 ರ ಭಾನುವಾರ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಮುಖ ಕೆಲಸವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಒದಗಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.