ಬೆಂಗಳೂರು : ಶುಕ್ರವಾರ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟವು ಬಾಂಬ್ ಸ್ಫೋಟ ಎಂದು ಸಿಎಂ ಸಿದ್ದರಾಮಯ್ಯ ದೃಢಪಡಿಸಿದರು.
ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದೃಢಪಡಿಸಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ಜನಪ್ರಿಯ ಕೆಫೆಯಲ್ಲಿ ಸಂಭವಿಸಿದ ಸ್ಫೋಟವು ಭಾರತದ ಐಟಿ ರಾಜಧಾನಿಗೆ ಆಘಾತವನ್ನುಂಟು ಮಾಡಿದೆ. ಘಟನೆ ಬಗ್ಗೆ ಕೆಲವೇ ಗಂಟೆಗಳ ನಂತರ ಈ ದೃಢೀಕರಣ ಬಂದಿದೆ. ಈ ಸಾಧನವನ್ನು ಗ್ರಾಹಕರ ಬ್ಯಾಗ್ ನಲ್ಲಿ ಇಡಲಾಗಿದೆ ಎಂದು ಸಿದ್ದರಾಮಯ್ಯ ದೃಢಪಡಿಸಿದರು.
ಬೆಂಗಳೂರಿನ ‘ರಾಮೇಶ್ವರಂ ಕಫೆ’ಯಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸ್ಥಳಕ್ಕೆ ‘NIA’ ತಂಡ ದೌಡಾಯಿಸಿದೆ.ಸ್ಥಳಕ್ಕೆ ಧಾವಿಸಿದ ಎನ್ ಐ ಎ ತಂಡ ಪರಿಶೀಲನೆ ನಡೆಸಿ ನಂತರ ಗಾಯಾಳುಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ.
ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್ ನಲ್ಲಿ ಇಂದು ಮಧ್ಯಾಹ್ನ ಏಕಾಏಕಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಪೋಟದ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.