ನವದೆಹಲಿ: ಸುಮಾರು 50 ದಿನಗಳ ಕಾಲ ತಲೆಮರೆಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ಹಲವಾರು ಮಹಿಳೆಯರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಸಂದೇಶ್ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತೃಣಮೂಲ ಕಾಂಗ್ರೆಸ್ ಮತ್ತು ಇತರ ಮೈತ್ರಿ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಸಂದೇಶ್ಖಾಲಿ ವಿವಾದದ ಬಗ್ಗೆ ಮಾತನಾಡಿದ್ದಾರೆ. ಘಟನೆಗೆ ಖಂಡಿಸಿದ ಪ್ರಧಾ ಮೋದಿ, ‘ನೀವು ಎಂದಾದರೂ ಟಿಎಂಸಿಯನ್ನು ಕ್ಷಮಿಸುತ್ತೀರಾ? ಎಂದು ಹೇಳಿದ್ದಾರೆ.
ಸಂದೇಶ್ಖಾಲಿಯ ಸಹೋದರಿಯರಿಗೆ ತೃಣಮೂಲ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ದೇಶ ನೋಡುತ್ತಿದೆ. ಇಡೀ ದೇಶವೇ ಕೋಪಗೊಂಡಿದೆ. ಸಂದೇಶ್ಖಾಲಿಯಲ್ಲಿ ನಡೆದ ಘಟನೆಯಿಂದ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮಕ್ಕೆ ನೋವಾಗಿರಬೇಕು… ಪಕ್ಷವು ಟಿಎಂಸಿ ನಾಯಕನನ್ನು ರಕ್ಷಿಸುತ್ತಿತ್ತು ಮತ್ತು ಬಿಜೆಪಿ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ ಪೊಲೀಸರು ನಿನ್ನೆ ಅವರನ್ನು ಬಂಧಿಸಬೇಕಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.