ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿದೆ.
ಬೆಂಗಳೂರಿನ ಇಂದಿರಾನಗರದ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಈ ಸ್ಪೋಟ ಸಂಭವಿಸಿದೆ. ನಿಗೂಢ ಸ್ಪೋಟದ ವೇಳೆ ಭಾರಿ ಶಬ್ದ ಕೇಳಿಬಂದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹೋಟೆಲ್ ನ ಚೇರ್ ನಲ್ಲಿ ಇಟ್ಟಿದ್ದ ಒಂದು ಬ್ಯಾಗ್ನಲ್ಲಿದ್ದ ಸ್ಫೋಟಕ ಏಕಾಏಕಿ ಸ್ಫೋಟಗೊಂಡಿದ್ದು,
ಬೆಂಕಿಯಿಂದಾಗಿ ಹೋಟೆಲ್ ಕೆಲವು ಭಾಗಗಳಲ್ಲಿ ಬೆಂಕಿಯಿಂದ ಹಾನಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.