ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ನಡುವೆ ಸ್ಥಾನಗಳನ್ನು ಔಪಚಾರಿಕವಾಗಿ ವಿಂಗಡಿಸಲಾಗಿದೆ. ಈ ನಡುವೆ ದೆಹಲಿಯ 4 ಮತ್ತು ಹರಿಯಾಣದ 1 ಸ್ಥಾನಗಳಿಗೆ ಎಎಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಸ್ಥಾನಗಳಿವೆ. ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಒಕ್ಕೂಟದ (ಐಎನ್ ಡಿಐ) ಮಿತ್ರ ಪಕ್ಷವಾದ ಎಎಪಿ ದೆಹಲಿಯಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಂದ ಮಾಡಿಕೊಂಡಿದೆ. ಮಂಗಳವಾರ ಎಎಪಿ ತನ್ನ ಎಲ್ಲಾ 4 ಅಭ್ಯರ್ಥಿಗಳನ್ನು ಘೋಷಿಸಿದೆ.
ಕುಲದೀಪ್ ಕುಮಾರ್, ಪೂರ್ವ ದೆಹಲಿ
ಮಹಾಬಲ ಮಿಶ್ರಾ, ಪಶ್ಚಿಮ ದೆಹಲಿ
ಸಾಹಿರಾಮ್ ಪೆಹಲ್ವಾನ್, ದಕ್ಷಿಣ ದೆಹಲಿ
ನವದೆಹಲಿಯಿಂದ ಸೋಮನಾಥ್ ಭಾರ್ತಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಈಶಾನ್ಯ ದೆಹಲಿ, ವಾಯುವ್ಯ ದೆಹಲಿ ಮತ್ತು ಚಾಂದನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ದೆಹಲಿ ಹೊರತುಪಡಿಸಿ, ಹರಿಯಾಣದ ಕುರುಕ್ಷೇತ್ರ ಕ್ಷೇತ್ರದಿಂದ ಎಎಪಿ ಸುಶೀಲ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.