ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ 8 ನೇ ಸಮನ್ಸ್ ಜಾರಿ ಮಾಡಿದೆ.
ಸಿಎಂ ಕೇಜ್ರಿವಾಲ್ ಅವರಿಗೆ ಮೊದಲ ಸಮನ್ಸ್ ಅನ್ನು ನವೆಂಬರ್ 2, 2023 ರಂದು ಕಳುಹಿಸಲಾಗಿದ್ದು, ಎರಡನೇ ಸಮನ್ಸ್ ಅನ್ನು ಡಿಸೆಂಬರ್ 21, 2023 ಕ್ಕೆ ಕಳುಹಿಸಲಾಗಿದೆ. ಮೂರನೇ ಸಮನ್ಸ್ ಅನ್ನು ಈ ವರ್ಷದ ಜನವರಿ ೩ ಕ್ಕೆ ಕಳುಹಿಸಲಾಗಿದೆ. ನಾಲ್ಕನೇ ಸಮನ್ಸ್ ಅನ್ನು ಜನವರಿ 17 ಕ್ಕೆ ಮತ್ತು ಐದನೇ ಸಮನ್ಸ್ ಅನ್ನು ಫೆಬ್ರವರಿ 2 ಕ್ಕೆ ಕಳುಹಿಸಲಾಗಿದೆ. ಫೆ.19 ರಂದು ಆರನೇ ಸಮನ್ಸ್ ನೀಡಿದೆ. ನಂತರ ಫೆ.22 ರಂದು ಏಳನೇ ಸಮನ್ಸ್ ಜಾರಿ ಮಾಡಿದೆ. ಯಾವುದೇ ವಿಚಾರಣೆಗೆ ಹಾಜರಾಗದ ಹಿನ್ನೆಲೆ ED ಅಧಿಕಾರಿಗಳು 8 ನೇ ಸಮನ್ಸ್ ನೀಡಿದ್ದಾರೆ.
ಇಡಿ ಸಮನ್ಸ್ ಗೆ ಸಂಬಂಧಿಸಿದಂತೆ ಮೋದಿ ಸರ್ಕಾರವು ತನಗೆ ಕಿರುಕುಳ ನೀಡುತ್ತಿದೆ ಎಂದು ಕೇಜ್ರಿವಾಲ್ ಪದೇ ಪದೇ ಆರೋಪಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷವು ಇಡಿ ಸಮನ್ಸ್ ಅನ್ನು ಕಾನೂನುಬಾಹಿರ ಎಂದು ನಿರಂತರವಾಗಿ ಕರೆಯುತ್ತಿದೆ.