ನವದೆಹಲಿ: ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆದ ಮತದಾನದ ನಡುವೆ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯ ಸಚೇತಕ ಮನೋಜ್ ಪಾಂಡೆ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮನೋಜ್ ಪಾಂಡೆ ರಾಯ್ಬರೇಲಿ ಜಿಲ್ಲೆಯ ಉಂಚಹಾರ್ ಕ್ಷೇತ್ರದ ಶಾಸಕರಾಗಿದ್ದಾರೆ.
ಈ ಬೆಳವಣಿಗೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಆಘಾತ ತಂದಿದೆ. ಇದಕ್ಕೂ ಮುನ್ನ ಸೋಮವಾರ ಅಖಿಲೇಶ್ ಯಾದವ್ ಕರೆದಿದ್ದ ಸಭೆಗೆ ಮನೋಜ್ ಪಾಂಡೆ ಸೇರಿದಂತೆ ಪಕ್ಷದ ಎಂಟು ಶಾಸಕರು ಹಾಜರಾಗಿರಲಿಲ್ಲ.
ರಾಜ್ಯಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಬಗ್ಗೆ ಶಾಸಕರಿಗೆ ವಿವರಿಸಲು ಪಕ್ಷದ ಮುಖ್ಯಸ್ಥರು ಸಭೆ ಕರೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಆದರೆ, ಮನೋಜ್ ಪಾಂಡೆ ಮತ್ತು ಇತರ ಏಳು ಶಾಸಕರಾದ ಮುಖೇಶ್ ವರ್ಮಾ, ಮಹಾರಾಜಿ ಪ್ರಜಾಪತಿ, ಪೂಜಾ ಪಾಲ್, ರಾಕೇಶ್ ಪಾಂಡೆ, ವಿನೋದ್ ಚತುರ್ವೇದಿ, ರಾಕೇಶ್ ಪ್ರತಾಪ್ ಸಿಂಗ್ ಮತ್ತು ಅಭಯ್ ಸಿಂಗ್ ಸಭೆಯಲ್ಲಿ ಭಾಗವಹಿಸಲಿಲ್ಲ.