![](https://kannadadunia.com/wp-content/uploads/2024/02/Student-2.jpg)
ಬೆಂಗಳೂರಿನ ತಾವರೆಕೆರೆಯಿಂದ ಶ್ರೀನಗರಕ್ಕೆ ನೇರ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿ 8ನೇ ತರಗತಿ ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಸಂಬಂಧಿಸಿ ಬಿಎಂಟಿಸಿ ಸ್ಪಷ್ಟನೆ ನೀಡಿದೆ.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕೃ.ರಾ.ಮಾರುಕಟ್ಟೆಗೆ ನೇರ ಸಾರಿಗೆ ಸೌಲಭ್ಯವಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ನಗರದ ಹೊರವಲಯದಲ್ಲಿರುವ ಟಿಟಿಎಂಸಿ/ನಿಲ್ದಾಣಗಳಿಂದ, ಇನ್ನೊಂದು ಟಿಟಿಎಂಸಿ/ನಿಲ್ದಾಣಗಳಿಗೆ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಈಗಾಗಲೇ ತಾವರೆಕೆರೆ ಹಾಗೂ ಶ್ರೀನಗರ ಎರಡು ಪ್ರದೇಶಗಳಿಗೆ ಪ್ರತ್ಯೇಕವಾಗಿ ಸಂಸ್ಥೆಯಿಂದ ಸಮರ್ಪಕ ಸಾರಿಗೆ ಸೇವೆ ಒದಗಿಸಲಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ನೇರ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ಸಾಧ್ಯವಿರುವುದಿಲ್ಲ.
ವಿದ್ಯಾರ್ಥಿ ಸಮುದಾಯದ ಅನುಕೂಲಕ್ಕಾಗಿ ಒಂದರಿಂದ ಎರಡು ಕಡೆ ಬಸ್ ಬದಲಾಯಿಸುವ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿ ರಿಯಾಯಿತಿ ಪಾಸ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಹಾಲಿಯಿರುವ ಸಾರಿಗೆಗಳಲ್ಲಿ ಪ್ರಯಾಣಿಸಿ ಸಹಕರಿಸಲು ಕೋರಲಾಗಿದೆ ಎಂದು ತಿಳಿಸಿದೆ.