ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಚಾಲಕನಿಲ್ಲದೇ ರೈಲು ಪಂಜಾಬ್ ಗೆ ಚಲಿಸಿದ ಘಟನೆ ನಡೆದಿದೆ.
ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿದ ಪರಿಣಾಮ ರೈಲು ಬರೋಬ್ಬರಿ 70 ಕಿಮೀ ಪ್ರಯಾಣಿಸಿದೆ. ನಂತರ ಸಿಬ್ಬಂದಿಗಳು ಮರಳಿನ ಮೂಟೆಯನ್ನು ಅಡ್ಡಹಾಕಿ ರೈಲು ನಿಲ್ಲಿಸಿದ್ದಾರೆ. ಜಮ್ಮುವಿನ ಕಥುವಾದಿಂದ ಸುಮಾರು 70 ಕಿ.ಮೀ ಪ್ರಯಾಣಿಸಿದ ನಂತರ, ಭಾರತೀಯ ರೈಲ್ವೆಯ ಸರಕು ರೈಲು ಪಂಜಾಬ್ ಹೋಶಿಯಾರ್ಪುರದ ದಸುಹಾದ ಉಚಿ ಬಸ್ಸಿಯನ್ನು ತಲುಪಿತು. ನಂತರ ಹೇಗೋ ಈ ರೈಲನ್ನು ನಿಲ್ಲಿಸಲಾಯಿತು. ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.
ಜಮ್ಮುವಿನಿಂದ ವಂಜಾಬ್ಗೆ ಚಲಿಸುತ್ತಿದ್ದರೈಲು,ಚಾಲಕನ ಬದಲಾವಣೆಗಾಗಿ ಜಮ್ಮುವಿನ ಕರುವಾನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25ರ ಸುಮಾರಿಗೆ ನಿಂತಿತ್ತು. ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿಯುವ ವೇಳೆಗೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಟ್ಟಿದ್ದಾನೆ. ಪರಿಣಾಮ ರೈಲು ಚಲಿಸಲು ಪ್ರಾರಂಭಿಸಿದೆ. ಈ ವೇಳೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಯಾರೂ ಕೂಡ ರೈಲಿನಲ್ಲಿ ಇರಲಿಲ್ಲ, ಬಳಿಕ 9 ಗಂಟೆ ವೇಳೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ.
ಇದು ಆತಂಕಕಾರಿ ಘಟನೆಯಾಗಿದ್ದು, ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ರೈಲ್ವೆ ಸುರಕ್ಷತಾ ಬಗ್ಗೆ ಕಳವಳ ಹುಟ್ಟುಹಾಕುತ್ತದೆ ಪ್ರಯಾಣಿಕರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕನನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ .