ಗದಗ : ಸೈಡ್ ಬಿಡು ಎಂದಿದ್ದಕ್ಕೆ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲೆಸೆದು ಕುಡುಕನೊಬ್ಬ ಕಿರಿಕ್ ಮಾಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿಯಲ್ಲಿ ರಸ್ತೆಯಲ್ಲಿ ಅಡ್ಡ ಬಂದ ಕುಡುಕನನ್ನು ಸೈಡ್ ಗೆ ನಿಲ್ಲುವಂತೆ ಹೇಳಿದಕ್ಕೆ ಕಲ್ಲು ಎಸೆದು ಬಸ್ ನ ಗ್ಲಾಸ್ ಪುಡಿ ಮಾಡಿರುವ ಘಟನೆ ನಡೆದಿದೆ.
ಎಷ್ಟೇ ಹಾರ್ನ್ ಮಾಡಿದ್ರೂ ದಾರಿ ಬಿಡದೇ ಮೊಂಡಾಟ ಮಾಡಿದ ಪುಟ್ಟಪ್ಪ ಎಂಬಾತ ಬಸ್ ಚಾಲಕ ಹಾಗೂ ಕಂಡಕ್ಟರ್ ಜೊತೆಗೆ ಕಿರಿಕ್ ಮಾಡಿಕೊಂಡು ಬಸ್ ಗೆ ಕಲ್ಲೆಸೆದು ಪರಾರಿಯಾಗಿದ್ದಾನೆ. ಮಗ ಮಾಡಿದ ತಪ್ಪಿಗೆ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೇಶ್ವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.