ಬೆಂಗಳೂರು : ನಟ ದರ್ಶನ್ ವಿರುದ್ಧ ನೀಡಿದ್ದ ದೂರು ವಾಪಸ್ ತೆಗೆದುಕೊಂಡು ಅಭಿಮಾನಿಗಳಲ್ಲಿ ಕನ್ನಡ ಪ್ರಜಾಪರ ವೇದಿಕೆಯ ಕನ್ನಡದ ಶಫಿ ಕ್ಷಮೆಯಾಚಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ನಾವು ಸಂಘಟನೆಯವರು ಆತುರಕ್ಕೆ ಬಿದ್ದು ನಿರ್ಧಾರ ಕೈಗೊಂಡೆವು. ಇದರಿಂದ ಕನ್ನಡ ಮನಸ್ಸುಗಳಿಗೆ ನೋವಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಅಲ್ಲದೇ ದೂರು ಹಿಂಪಡೆಯುವುದಾಗಿಯೂ ಕನ್ನಡ ಪ್ರಜಾಪರ ವೇದಿಕೆಯ ಕನ್ನಡ ಶಫಿ ವಿಡಿಯೋ ಮೂಲಕ ಹೇಳಿದ್ದಾರೆ.
ನಿರ್ಮಾಪಕ ಉಮಾಪತಿ ವಿರುದ್ಧ ನಟ ದರ್ಶನ್ ನೀಡಿರುವ ಹೇಳಿಕೆ ಸಂಬಂಧ ನಟ ದರ್ಶನ್ ವಿರುದ್ಧ ಫಿಲಂಚೇಂಬರ್ ಗೆ ದೂರು ನೀಡಲಾಗಿತ್ತು. ನಟ ದರ್ಶನ್ ಗುಮ್ಮಿಸ್ಕೊತಿಯಾ ಎಂದು ಹೇಳುವ ಮೂಲಕ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದಾರೆ, ಅವರು ಕ್ಷಮೆಯಾಚಿಸಬೇಕು ಎಂದು ಪ್ರಜಾಪರ ವೇದಿಕೆ ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ್ದರು.
ನಟ ದರ್ಶನ್ ಬಳಸಿದ ‘ಗುಮ್ಮಿಸ್ಕೊತಿಯಾ..?’ ‘ತಗಡು’ ಪದ ಬಳಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು, ಅಲ್ಲದೇ ದರ್ಶನ್ ಅವರು ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಮಹಿಳಾ ಸಂಘಟನೆಗಳು ಪೊಲೀಸ್ ಠಾಣೆಗೆ ದೂರು ನೀಡಿದೆ.