ಕಣ್ಣಿನ ಸಮಸ್ಯೆಗೆ ‘ಮೂತ್ರ’ ಮದ್ದು ಎಂಬುದನ್ನು ಹೇಳುವ ಯುವತಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಸ್ಪ್ಯಾನಿಷ್ ಟಿಕ್ಟಾಕ್ ಬಳಕೆದಾರ ಸುಮಾ ಫ್ರೇಲ್ ಎಂಬುವವರು ಈ ಮಾಹಿತಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಕಣ್ಣಿನ ಹನಿಗಳಂತೆ ಮೂತ್ರ ಬಳಕೆ
ಕಳಪೆ ದೃಷ್ಟಿ ಮತ್ತು ಕಣ್ಣಿನ ಸಮಸ್ಯೆಯನ್ನು ಗುಣಪಡಿಸಲು ಮೂತ್ರವನ್ನು ಕಣ್ಣಿನ ಹನಿಗಳಾಗಿ ಬಳಸಿದ್ದೇನೆ ಎಂದು ಫ್ರೇಲ್ ಹೇಳಿದ್ದಾರೆ. ಅಷ್ಟೇ ಅಲ್ಲ, ಮೂತ್ರವನ್ನು ಕಣ್ಣಿನ ಹನಿಗಳಾಗಿ ಬಳಸಿದ ನಂತರ ತನ್ನ ದೃಷ್ಟಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ.
20 ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಪ್ರಕೃತಿ ಚಿಕಿತ್ಸಕ ಜಾನ್ ಡಬ್ಲ್ಯೂ ಆರ್ಮ್ಸ್ಟ್ರಾಂಗ್ ಜನಪ್ರಿಯಗೊಳಿಸಿದ ‘ಮೂತ್ರ ಚಿಕಿತ್ಸೆ’ ಬಳಕೆಯನ್ನು ಅವರು ಬೆಂಬಲಿಸಿದ್ದಾರೆ.
ಚಿಕಿತ್ಸೆಗಾಗಿ ಮೂತ್ರ ಚಿಕಿತ್ಸೆ
ಮೂತ್ರವನ್ನು ಹಲವಾರು ವೈದ್ಯಕೀಯ ಚಿಕಿತ್ಸೆಗಳಲ್ಲಿ ಬಳಸಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ಜನರು ಸೇವಿಸಲು ಸಹ ಬಳಸಲಾಗುತ್ತದೆ ಎನ್ನಲಾಗಿದೆ . ಫ್ರೇಲ್ ತನ್ನ ವೀಡಿಯೊದಲ್ಲಿ ಮೂತ್ರವನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕೂಡ ಮಾತನಾಡಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ನಿಜವಾಗಿಯೂ ಉಪಯುಕ್ತವಾಗಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲ. ಆದ್ದರಿಂದ ಅಂತರ್ಜಾಲದಲ್ಲಿ ಕಾಣುವ ಎಲ್ಲವನ್ನೂ ನಂಬಬಾರದು ಮತ್ತು ಖಂಡಿತವಾಗಿಯೂ ಪ್ರಯತ್ನಿಸಬಾರದು!