ಬೆಂಗಳೂರು : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ , ಕಾಟೇರ ಪಾರ್ಟಿ ವಿವಾದದ ಬಳಿಕ ನಟ ದರ್ಶನ್ ಗೆ ಹೊಸದೊಂದು ವಿವಾದ ಸುತ್ತಿಕೊಂಡಿದೆ. ನಿರ್ಮಾಪಕ ಉಮಾಪತಿ ವಿರುದ್ಧ ಹೇಳಿಕೆ ನೀಡಿದ ‘ಡಿ ಬಾಸ್’ ಗೆ ಸಂಕಷ್ಟ ಎದುರಾಗಿದೆ.
‘ಕಾಟೇರ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ನಟ ದರ್ಶನ್ ತೂಗುದೀಪ ವಿವಾದ ಸೃಷ್ಟಿಸಿದ್ದಾರೆ. ಬ್ಲಾಕ್ ಬಸ್ಟರ್ ಹಿಟ್ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಅವರನ್ನು ಟೀಕಿಸಲು ದರ್ಶನ್ ವೇದಿಕೆಗೆ ಬಂದಿದ್ದು, ಅವರ ವಿರುದ್ಧ ನೀಡಿದ ಕೆಲವು ಹೇಳಿಕೆಗಳು ಭಾರಿ ವಿವಾದ ಸೃಷ್ಟಿಸಿದೆ.
ನಟ ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆ ದೂರು ಸಲ್ಲಿಸಿದೆ. ಕರ್ನಾಟಕ ಪ್ರಜಾಪರ ವೇದಿಕೆ ‘ಫಿಲಂ ಚೇಂಬರ್’ಗೆ ದೂರು ನೀಡಿದ್ದಾರೆ. ದರ್ಶನ್ ಅವರು ‘ಗುಮ್ಮಿಸ್ಕೋತಿಯಾ’ ಅಂತ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಹೇಳಿದೆ. ಅಲ್ಲದೇ ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಭಾರಿ ಚರ್ಚೆಗಳಾಗುತ್ತಿದ್ದು, ಫ್ಯಾನ್ಸ್ ವಾರ್ ಕೂಡ ಆರಂಭವಾಗಿದೆ.
ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು..ಹೀಗಂತ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ ಖಡಕ್ ಆಗಿ ತಿರುಗೇಟು ನೀಡಿದ್ದರು .ಪ್ರಸನ್ನ ಚಿತ್ರಮಂದಿರದಲ್ಲಿ ‘ಕಾಟೇರ’ ಚಿತ್ರದ 50ನೇ ದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ಉಮಾಪತಿಗೆ ಖಡಕ್ ತಿರುಗೇಟು ನೀಡಿದ್ದರು. ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು, ಟೈಟಲ್ ಕೊಟ್ಟಿದ್ದೇ ನಾನು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದ್ರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಅಂದರೆ ನೀನು ಮಾಡಬಹುದಿತ್ತಲ್ಲ..ಸುಮ್ಮನೆ ಮಾತನಾಡಬಾರದು….ಆಧಾರ ಇಟ್ಟುಕೊಂಡು ಮಾತನಾಡಬೇಕು..ಎಂದು ನಟ ದರ್ಶನ್ ಖಡಕ್ ಆಗಿ ಮಾತನಾಡಿದ್ದರು.