![](https://kannadadunia.com/wp-content/uploads/2022/06/Dinesh-Gundu-Rao.jpg)
ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಔಷಧಿ ಲಭ್ಯವಿರುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರ ಗಳಲ್ಲಿ ತುರ್ತು ಅಗತ್ಯ ಔಷಧಿಗಳ ಕೊರತೆ ಇದ್ದಲ್ಲಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅನುದಾದಡಿ, ಎಬಿಎಆರ್ ಕೆ ಅನುದಾನ, ಎಆರ್ ಎಸ್ ಅನುದಾನ ಹಾಗೂ ಇತರ ಅನುದಾನಗಳಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡಲು ಸೂಚಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಎಲ್ಲಾ ಔಷಧಿಗಳೂ ಲಭ್ಯವಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಶೀಘ್ರೇ ಎಲ್ಲ ಔಷಧಗಳು ಸಿಗಲಿವೆ ಎಂದು ತಿಳಿಸಿದ್ದಾರೆ.