ನವದೆಹಲಿ: ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡ ನಂತರ ತಮ್ಮ ಪಕ್ಷವು ರಾಹುಲ್ ಗಾಂಧಿ ಅವರ ಭಾರತ್ ನ್ಯಾಯ್ ಯಾತ್ರೆಗೆ ಸೇರಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ಮುಂದುವರೆದಿದೆ ಮತ್ತು ಸೀಟು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇದೀಗ ಮಾತುಕತೆಗಳು ನಡೆಯುತ್ತಿವೆ, ಅವರಿಂದ ಪಟ್ಟಿಗಳು ಬಂದಿವೆ, ನಾವು ಅವರಿಗೆ ಪಟ್ಟಿಯನ್ನು ಸಹ ನೀಡಿದ್ದೇವೆ. ಸೀಟು ಹಂಚಿಕೆ ಮುಗಿದ ತಕ್ಷಣ, ಸಮಾಜವಾದಿ ಪಕ್ಷವು ಅವರ ನ್ಯಾಯ ಯಾತ್ರೆಗೆ ಸೇರುತ್ತದೆ” ಎಂದು ಅವರು ಹೇಳಿದರು. ಅಖಿಲೇಶ್ ಯಾದವ್ ಹೇಳಿದ್ದಾರೆ.