ಅಯೋಧ್ಯೆ : ಅಯೋಧ್ಯೆಯಲ್ಲಿ ದರ್ಶನ ನೀಡುತ್ತಿರುವ ಬಾಲರಾಮನನ್ನು ನೋಡಲು ಪ್ರತಿನಿತ್ಯ ಸಹಸ್ರಾರು ಭಕ್ತರು ಅಯೋಧ್ಯಕ್ಕೆ ಹೋಗುತ್ತಿದ್ದಾರೆ. ಇದೀಗ ಮಲೆನಾಡಿನಲ್ಲಿ ಅಡಕೆ ಕೊಳೆ ರೋಗ, ಎಲೆ ಚುಕ್ಕೆ ರೋಗದಿಂದ ಆತಂಕಕ್ಕೀಡಾಗಿರುವ ಮಲೆನಾಡಿನ ರೈತರು ಬಾಲರಾಮನ ಮೊರೆ ಹೋಗಿದ್ದಾರೆ.
ಹೌದು, ಮಲೆನಾಡಿನ ರೈತರು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳಲು ಬಾಲರಾಮನ ಮೊರೆ ಹೋಗಿದ್ದಾರೆ. ರೈತರು ಅಡಿಕೆ ಹಿಂಗಾರವನ್ನು ತೆಗೆದುಕೊಂಡು ಅಯೋಧ್ಯೆಗೆ ಹೋಗಿದ್ದು, ಇಂದು ಅಥವಾ ನಾಳೆ ರಾಮನಿಗೆ ಅಡಿಕೆ ಹಿಂಗಾರವನ್ನು ಸಮರ್ಪಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ರೈತರು ಭಿನ್ನಹ ಪತ್ರ, ಅಡಕೆ ಹಿಂಗಾರವನ್ನು ರಾಮಮಂದಿರಕ್ಕೆ ಕೊಂಡೊಯ್ದಿದ್ದು, ಮಲೆನಾಡಿನ ರೈತರ ಸಮಸ್ಯೆಯನ್ನು ಪರಿಹರಿಸಿ ದೇವರೇ ಎಂದು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆ ಬಾಳೆಹೊನ್ನೂರಿನ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಅಡಕೆ ಹಿಂಗಾರಕ್ಕೆ ಮಲೆನಾಡಿನಲ್ಲಿ ಬಹಳ ಪ್ರಾಮುಖ್ಯತೆಯಿದೆ. ಅಡಕೆ ಹಿಂಗಾರವಿಲ್ಲದೇ ಯಾವುದೇ ಪೂಜೆ ಹವನಗಳು ನಡೆಯಲ್ಲ. ದೀಪಾವಳಿ ಹಬ್ಬದಲ್ಲಿ ಪ್ರತಿಮನೆಗಳಲ್ಲಿ ಅಡಕೆ ಹಿಂಗಾರವನ್ನಿಟ್ಟು ಪೂಜಿಸುವುದು ಪದ್ದತಿ.