ಬೆಂಗಳೂರು : ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದು, ರಾವಣನನ್ನೇ ಮೀರಿಸಿದ ಆಡಳಿತವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ರಾವಣನಿಗೆ ತನ್ನ ವೈರಿ ಶ್ರೀರಾಮ ಲಂಕೆಗೆ ಬರುವುದು ಗೊತ್ತಿದ್ದರೂ ಆತ ಬರುವ ಹಾದಿಗೆ ಬೇಲಿ ಹಾಕಲಿಲ್ಲ. ಅನ್ನದಾತರು ಬರುವ ರಸ್ತೆಗಳಿಗೆ ಮೋದಿ ಸರ್ಕಾರ ಮುಳ್ಳುತಂತಿಯ ಬೇಲಿ ಹಾಕಿದೆ, ರಸ್ತೆಗಳಿಗೆ ಮೊಳೆ ಹೊಡೆದಿದೆ. ರಾಮಮಂದಿರ ಉದ್ಘಾಟಿಸಿದವರ ಆಡಳಿತ ರಾವಣನನ್ನೇ ಮೀರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದ್ದಾರೆ.