![](https://kannadadunia.com/wp-content/uploads/2024/02/reels.jpg)
ಬೆಂಗಳೂರು : ರಾಜ್ಯ ಸರ್ಕಾರವು ಸಂವಿದಾನ ಜಾಗೃತಿ ಜಾಥಾದ ಅಂಗವಾಗಿ ಜನತೆಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.
ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ರಾಜ್ಯ ಸರ್ಕಾರವು ಜನತೆಗಾಗಿ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ಸಂವಿಧಾನದ ಮಹತ್ವ, ಪೀಠಿಕೆಯ ವೈಶಿಷ್ಟ್ಯ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾದರೂ ಅಂಶವನ್ನು ಇಟ್ಟುಕೊಂಡು ವಿಭಿನ್ನವಾಗಿ ರೀಲ್ಸ್ ಮಾಡಿ ಕಳುಹಿಸಬಹುದು.
ಫೆಬ್ರವರಿ 20 ಸಂಜೆ 5 ಗಂಟೆಯ ಒಳಗಾಗಿ ನೀವು ಮಾಡಿರುವ ರೀಲ್ಸ್ ಅನ್ನು bcac2024@gmail.com ಗೆ ಕಳುಹಿಸಿ. ಇದರಲ್ಲಿ ಆಯ್ಕೆ ಆದ ರೀಲ್ಸ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತದೆ. ಒಟ್ಟು ಲೈಕ್ಸ್ಗಳ ಮೇಲೆ ವಿಜೇತರ ಆಯ್ಕೆ ನಡೆಯುತ್ತದೆ. ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 25,000 ರೂ. ಮತ್ತು ತೃತೀಯ ಬಹುಮಾನ 15,000 ರೂ. ನಗದು ಬಹುಮಾನ ವಿಜೇತ ಸ್ಪರ್ಧಿಗಳಿಗೆ ಸಿಗಲಿದೆ.