![](https://kannadadunia.com/wp-content/uploads/2024/02/WhatsApp-Image-2024-02-14-at-4.49.28-AM.jpeg)
ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ನೀಡಲು ಫೆ. 12 ರಿಂದ ಮಾ. 12 ರ ವರೆಗೆ ಇ-ಆಸ್ತಿ ಖಾತಾ ಆಂದೋಲನ ಕಾರ್ಯಕ್ಕಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.
ಸಲ್ಲಿಸಬೇಕಾದ ದಾಖಲೆಗಳು: ಅರ್ಜಿ, ಅರ್ಜಿದಾರರ ಫೋಟೋ ಮತ್ತು ಮನೆ ಫೋಟೋ, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, 15 ವರ್ಷಗಳ ಇ.ಸಿ , ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ, ಭೂ ಪರಿವರ್ತನೆ ಆದೇಶ, ಅನುಮೋದಿತ ಬಡಾವಣೆ ನಕ್ಷೆ,
ಆಸ್ತಿ ವಿವರಗಳನ್ನು ‘ಆಸ್ತಿ ಕಣಜ’ ಆನ್ಲೈನ್ನಲ್ಲಿ ಸಲ್ಲಿಸಬೇಕಾದ ದಾಖಲೆಗಳು: 2016-17 ನೇ ಸಾಲಿನಿಂದ 2023-24ನೇ ಸಾಲಿನವರೆಗೆ ಸ್ವಯಂ ಘೋಷಿತ ಆಸ್ತಿತೆರಿಗೆ ಪಾವತಿಸಿರುವ ಜೆರಾಕ್ಸ್, ನೀರಿನ ತೆರಿಗೆ ಪಾವತಿಸಿರುವ ಚಲನ್, ಕಟ್ಟಡ ನಿರ್ಮಾಣ ಮಾಡಲು ಪಡೆದಿರುವ ಅನುಮೋದಿತ ನಕ್ಷೆ ಹಾಗೂ ಪರವಾನಗಿ ಜೆರಾಕ್ಸ್, ಆಸ್ತಿಯ ಜಿ.ಪಿ.ಎಸ್. ಭಾವಚಿತ್ರ, ವಿದ್ಯುಚ್ಛಕ್ತಿ(ಬಿಲ್) ಆರ್.ಆರ್. ನಂಬರ್, ಭೂ ಪರಿವರ್ತನೆ ಆದೇಶ, ಆಗದೇ ಇದ್ದಲ್ಲಿ ಪಹಣಿ ಪ್ರತಿಯನ್ನು ಸಲ್ಲಿಸಬೇಕು.