ಬೆಂಗಳೂರು : ‘ಜಲ ಜೀವನ್ ಮಿಷನ್’ ಯೋಜನೆಯಡಿ ರಾಜ್ಯ ಸರ್ಕಾರ 940.09 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ನಾಡಿನ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಒಟ್ಟು 258 ಗ್ರಾಮ ಪಂಚಾಯತಿಗಳು ಹಾಗೂ ಹೆಚ್ಚುವರಿ 175 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ, ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ₹940.09 ಕೋಟಿಗೂ ಅಧಿಕ ಹಣವನ್ನು ಮಂಜೂರು ಮಾಡಿದೆ.
➧ ಹಾವೇರಿ ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮ ಪಂಚಾಯತಿಗಳ ಸಂಖ್ಯೆ : 7
ಒಟ್ಟು ಅನುದಾನ : ₹21.00 ಕೋಟಿ
➧ ಚಿಕ್ಕಬಳ್ಳಾಪುರ ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳು : 235
ಒಟ್ಟು ಅನುದಾನ: ₹148.59 ಕೋಟಿ
➧ ತುಮಕೂರು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನವಸತಿಗಳ ಸಂಖ್ಯೆ : 658
ಒಟ್ಟು ಅನುದಾನ: ₹324.86 ಕೋಟಿ
➧ ಕೊಡಗು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಮನೆಗಳ ಸಂಖ್ಯೆ : 1,408
ಒಟ್ಟು ಅನುದಾನ: ₹4.99 ಕೋಟಿ
➧ ಮೈಸೂರು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನವಸತಿ ಪ್ರದೇಶಗಳ ಸಂಖ್ಯೆ : 79
ಒಟ್ಟು ಅನುದಾನ: ₹63.65 ಕೋಟಿ
➧ ಬೆಳಗಾವಿ ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ: 176
ಒಟ್ಟು ಅನುದಾನ: ₹377 ಕೋಟಿ
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಇಲಾಖೆ ಬದ್ದವಾಗಿದ್ದು, ನಾಡಿನ ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಕಾರ್ಯೋನ್ಮುಖವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.