ರಾಯಚೂರು : ಮೇಲಾಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿ ಸರ್ಕಾರ ನೌಕರನೋರ್ವ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಎಸಿ ಕಚೇರಿಯ ಲ್ಯಾಂಡ್ ರೆಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಿ ದರ್ಜೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಮೃತನನ್ನು ವಾಸಿಂ ಚೌದರಿ (36) ಎಂದು ಗುರುತಿಸಲಾಗಿದೆ.
ವಾಸಿಂ ಕೂಲೆಂಟ್ ವಾಟರ್ ಬಾಟಲ್ ಗೆ ಆ್ಯಸಿಡ್ ಬೆರೆಸಿ ಕುಡಿದಿದ್ದು, ಕೂಡಲೇ ನೌಕರನನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.