![](https://kannadadunia.com/wp-content/uploads/2021/05/Vidhana_Soudha_750_1-1.gif)
ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಕರ್ನಾಟಕ ಜಲಮಂಡಳಿಯಲ್ಲಿ ಖಾಲಿ ಇರುವ ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 50 ಸಹಾಯಕ ಎಂಜಿನಿಯರ್ ಮತ್ತು 14 ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಸಲು ಫೆಬ್ರವರಿ 10 ರಿಂದ ಮಾರ್ಚ್ 10 ರವರೆಗೆ ಅವಕಾಶ ನೀಡಲಾಗುವುದು. ಅರ್ಜಿ ಶುಲ್ಕ ಪಾವತಿಸಲು ಮಾರ್ಚ್ 14 ಕೊನೆಯ ದಿನವಾಗಿದೆ.