![](https://kannadadunia.com/wp-content/uploads/2021/12/Smt._Nirmala_Sitharaman_addressing_a_press_conference_on_June_28_2021_in_New_Delhi_cropped.jpg)
ನವದೆಹಲಿ :ದೇಶ ವಿಭಜನೆಯ ಅಸ್ತ್ರವನ್ನು ಕಾಂಗ್ರೆಸ್ ಪಕ್ಷವು ಕರ್ನಾಟಕದಿಂದ ಶುರು ಮಾಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಪಿಸಿದ್ದಾರೆ.
ಸಂಸದ ಡಿ.ಕೆ. ಸುರೇಶ್ ಅವರ ದೇಶ ವಿಭಜನೆ ಹೇಳಿಕೆಯನ್ನು ಖಂಡಿಸಿರುವ ನಿರ್ಮಲಾ ಸೀತಾರಾಮನ್, ದೇಶ ವಿಭಜಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಲೆ ಈಗ ಕರ್ನಾಟಕದಿಂದ ವಿಭಜನೆಯ ಅಸ್ತ್ರವನ್ನು ಶುರು ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರು ದೇಶವನ್ನು ತುಂಡು ತುಂಡು ಮಾಡಲು ಈ ರೀತಿಯ ಅಸ್ತ್ರಗಳನ್ನು ಆಗಾಗ ಬಳಸಿಕೊಳ್ಳುತ್ತಾರೆ. ದೇಶ ವಿಭಜನೆಯ ಅಸ್ತ್ರವನ್ನು ಕರ್ನಾಟಕದಿಂದ ಶುರುವಾಗಿದೆ ಎಂದರು.