ಬೆಂಗಳೂರು : 100 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬಾಡಿಗೆ ಮನೆಯಲ್ಲಿ ಇರುವ ಫಲಾನುಭವಿಗಳಿಗೆ ಸರ್ಕಾರ ಡಿ ಲಿಂಕ್ ಆಯ್ಕೆ ನೀಡಿದೆ.
ನೀವು ಇನ್ನುಮುಂದೆ ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದರೆ ಚಿಂತೆಪಡಬೇಕಿಲ್ಲ. ಹೌದು, ಮನೆಯನ್ನು ಬದಲಾವಣೆ ಮಾಡಿದವರಿಗೆ ಕೂಡಲೇ ಹಳೇ ವಿಳಾಸದ ಸಂಪರ್ಕವನ್ನು ರದ್ದು ಪಡಿಸಿ, ಹೊಸ ವಿಳಾಸಕ್ಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಸರ್ಕಾರ ಡಿ ಲಿಂಕ್ ಆಯ್ಕೆ ನೀಡಿದೆ.
ಇನ್ಮುಂದೆ ಹೊಸ ಬಾಡಿಗೆ ಮನೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದ್ದು, ಸೇವಾಸಿಂಧು ಪೋರ್ಟಲ್ ನಲ್ಲಿ ಬದಲಾವಣೆಗೆ ಅವಕಾಶ ನೀಡಲಾಗಿದೆ. ಆದರೆ ಸದ್ಯ ಸೇವಾಸಿಂಧು ಪೋರ್ಟಲ್ ನಲ್ಲಿ ಅವಕಾಶ ನೀಡಿಲ್ಲ. ಇನ್ನೊಂದು ವಾರದಲ್ಲಿ ಓಪನ್ ಆಗುವ ಸಾಧ್ಯತೆಯಿದೆ . ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವೇಳೆಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದು, ಈ ಹಿಂದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಹಾಗೂ ಈಗ ಆ ಮನೆಯನ್ನು ಈಗ ಬದಲಾಯಿಸಿದರೆ ಹಳೆಯ ಯೋಜನೆಯ ನೋಂದಣಿಯನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ನಂಬರ್ ಜೊತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಇದಕ್ಕೆ ಡಿ ಲಿಂಕ್ ಪ್ರಕ್ರಿಯೆ ಮಾಡಬೇಕು.
ಇನ್ನು ಮುಂದೆ ಬಾಡಿಗೆ ಮನೆಯನ್ನು ಬದಲಾವಣೆ ಮಾಡುವವರು ಹಳೇ ಮನೆಯ ವಿದ್ಯುತ್ ಸಂಪರ್ಕದ ಆರ್ ಆರ್ ನಂಬರ್ಗೆ ಜೋಡಿಸಿದ್ದ ಆಧಾರ್ ಸಂಖ್ಯೆಯನ್ನು De-Link ಮಾಡಬಹುದಾಗಿದೆ. ಆಗ ಹೊಸ ಮನೆಯ ಆರ್ ಆರ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು Re-Link ಮಾಡಿಕೊಳ್ಳಬಹುದಾಗಿದೆ.