ಬೆಂಗಳೂರು : ಹೆದ್ದಾರಿ ನಿರ್ಮಾಣದಿಂದ ಹಿಡಿದು ರೈಲನ್ನು ಹಳಿಗೆ ತರುವವರೆಗೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿದ ಕೊಡುಗೆ ಅಪರಿಮಿತ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 16 ಕಿಲೋಮೀಟರ್‌ಗೂ, 3,265 ಕಿ.ಮೀ.ಗೂ ನಡುವೆ ವ್ಯತ್ಯಾಸವೇ ತಿಳಿದಿಲ್ಲದ, 13,500 ಕಿಲೋಮೀಟರಿನಷ್ಟು ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ಮೋದಿ ಸರ್ಕಾರದ ಎದುರು, ತಮ್ಮ ಪಕ್ಷದ ಸರ್ಕಾರ ನೀಡಿದ 6,750 ಕಿ.ಮೀ ಕೊಡುಗೆ ಅತ್ಯಂತ ಕುಬ್ಜವಾಗಿ ಕಾಣುತ್ತದೆ ಎಂಬ ಸತ್ಯವನ್ನು ಚೆನ್ನಾಗಿ ತಿಳಿದಿರುವ ಸಿದ್ದರಾಮಯ್ಯ ಅವರು ಅದನ್ನು ಮರೆಮಾಚಲು ನಿತ್ಯವೂ ವಿನೂತನ ನಾಟಕಗಳನ್ನಾಡುತ್ತಿದ್ದಾರೆ ವಾಗ್ದಾಳಿ ನಡೆಸಿದೆ.
ಈ ವಾರ ಕಾಂಗ್ರೆಸ್ ಸರ್ಕಾರದ ನಿಲಯ ಕಲಾವಿದರಿಂದ ಬುರುಡೆ ರಾಮಯ್ಯ ಎಂಬ ನಾಟಕವನ್ನು ದೆಹಲಿಯಲ್ಲಿ ಆಡಿತೋರಿಸಲಿದ್ದಾರೆ ಎಂದು ವ್ಯಂಗ್ಯವಾಡಿದೆ.