ಬೆಂಗಳೂರು: ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಗಳ ಬೆಲೆಯನ್ನು ಶೇ.10 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಫೆ.1 ರಿಂದಲೇ ರಾಜ್ಯ ಸರ್ಕಾರವು ಬಿಯರ್ಗಳ ಮೇಲೆ ಶೇ.10 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಈ ಮೂಲಕ ಬಿಯರ್ ಬಾಟಲ್ ವೊಂದರ ಬೆಲೆಯಲ್ಲಿ 10 ರಿಂದ 15 ರುಪಾಯಿ ವರೆಗೂ ಹೆಚ್ಚಳವಾಗಿದೆ.
ಕಳೆದ ವರ್ಷದ ಜುಲೈನಲ್ಲಿ ಅಬಕಾರಿ ಇಲಾಖೆಯು ಐಎಂಎಲ್ ಗಳ ಮೇಲೆ ಶೇ.20 ಮತ್ತು ಬಿಯರ್ಗಳ ಮೇಲೆ ಶೇ.10 ರಷ್ಟು ಸುಂಕ ಹೆಚ್ಚಳ ಮಾಡಿತ್ತು. ಇದೀಗ ಕೇವಲ ಬಿಯರ್ಗಳ ಮೇಲಿನ ಸುಂಕ ವನ್ನು ಶೇ.10 ರಷ್ಟು ಹೆಚ್ಚಿಸುವ ಮೂಲಕ ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದೆ.